ಇವತ್ತು ‘ವಿಶ್ವ ತಾಯಂದಿರ’ ದಿನವಂತೆ…
ಇವತ್ತೆ ಏಕೆ..?? ಈ ದಿನದ ಇತಿಹಾಸ ಏನು? ಎಂದು ಆಚರಿಸುತ್ತಿರುವವರಲ್ಲಿ ಕೇಳಿದರೆ..ಉತ್ತರ ಗೊತ್ತಿಲ್ಲ..ಎಲ್ರು ಆಚರಣೆ ಮಾಡ್ತಾರೆ ನಾವು ಮಾಡ್ತಿವಿ ಅಂತಾರೆ,ತಿಳಿದು ಕೊಳ್ಳುವ ಗೋಜಿಗೆ ಯಾರು ಹೋಗುವುದೇ ಇಲ್ಲ.. ಪಾಶ್ಚಿಮಾತ್ಯ ದೇಶಗಳಲ್ಲಿ ಎರಡು ನಿಮಿಷಕ್ಕೊಂದು ವಿಚ್ಚೇದನ ಆಗುತ್ತದೆ, ವಿಚ್ಚೇದನ ಪಡೆದ ದಂಪತಿಗಳ ಮಕ್ಕಳು ಒಂದೊ ತಾಯಿಯ ಬಳಿ ಇಲ್ಲವೇ ತಂದೆಯ ಬಳಿ ಬದುಕುತ್ತಾರೆ, ವಿಚ್ಚೇದನ ಪಡೆದವರು ಏಕಾಂಗಿ…
