ಇವತ್ತು ‘ವಿಶ್ವ ತಾಯಂದಿರ’ ದಿನವಂತೆ…


ಇವತ್ತೆ ಏಕೆ..?? ಈ ದಿನದ ಇತಿಹಾಸ ಏನು? ಎಂದು ಆಚರಿಸುತ್ತಿರುವವರಲ್ಲಿ ಕೇಳಿದರೆ..ಉತ್ತರ ಗೊತ್ತಿಲ್ಲ..ಎಲ್ರು ಆಚರಣೆ ಮಾಡ್ತಾರೆ ನಾವು ಮಾಡ್ತಿವಿ ಅಂತಾರೆ,ತಿಳಿದು ಕೊಳ್ಳುವ ಗೋಜಿಗೆ ಯಾರು ಹೋಗುವುದೇ ಇಲ್ಲ..

ಪಾಶ್ಚಿಮಾತ್ಯ ದೇಶಗಳಲ್ಲಿ ಎರಡು ನಿಮಿಷಕ್ಕೊಂದು ವಿಚ್ಚೇದನ ಆಗುತ್ತದೆ, ವಿಚ್ಚೇದನ ಪಡೆದ ದಂಪತಿಗಳ ಮಕ್ಕಳು ಒಂದೊ ತಾಯಿಯ ಬಳಿ ಇಲ್ಲವೇ ತಂದೆಯ ಬಳಿ ಬದುಕುತ್ತಾರೆ, ವಿಚ್ಚೇದನ ಪಡೆದವರು ಏಕಾಂಗಿ ಜೀವನ ನಡೆಸುವುದಿಲ್ಲ ಇನ್ನೊಬ್ಬರನ್ನು ಮದುವೆಯಾಗುತ್ತಾರೆ, ಹೀಗೆ ಇನ್ನೊಂದು ಮದುವೆ ಆದಾಗ ತಂದೆಯ ಬಳಿ ಬದುಕುತ್ತಿರರುವ ಮಕ್ಕಳಿಗೆ ಹೊಸ ತಾಯಿ ಬಂದಿರುತ್ತಾಳೆ, ಈ ಹೊಸ ತಾಯಿ (ತಮ್ಮ ಇಡೀ ಜೀವನದಲ್ಲಿ ಎಷ್ಟು ಹೊಸ ತಾಯಿಯನ್ನು ಆ ಮಕ್ಕಳು ನೋಡಬೇಕೊ ಗೊತ್ತಿಲ್ಲ) ಮತ್ತು ಆ ತಂದೆಯ ಜೊತೆಜೀವನ ನಡೆಸುತ್ತಿರುವ ಮಕ್ಕಳಿಗೆ ತಮ್ಮ ಹೆತ್ತ ತಾಯಿಯನ್ನು ನೋಡಬೇಕು ಅವರೊಂದಿಗೆ ಮಾತನಾಡಬೇಕು ಎಂಬ ಆಸೆ ಇರುತ್ತದಲ್ಲವೇ.? ಹಾ ಇದೇ ಆಸೆ ಈ ತಾಯಂದಿರ ದಿನದ ಉಗಮಕ್ಕೆ ಕಾರಣವಾಗಿದ್ದು. ತಮ್ಮ ಹೆತ್ತ ತಾಯಿಯನ್ನು ಭೇಟಿಯಾಗಿ, ಅವರೊಂದಿಗೆ ದಿನ ಕಳೆಯಲು ವರ್ಷದ ಒಂದು ದಿನ ವನ್ನು ಮೀಸಲಿಟ್ಟರು, ಬೇರೆ ದಿನವೆಲ್ಲ ಅವರು ಪುರುಸೊತ್ತು ಇಲ್ಲದೇ ಇರುವ ಕಾರಣ ಭಾನುವಾರವನ್ನೆ ಆಯ್ಕೆ ಮಾಡಿಕೊಂಡರು. ಕಾಲಾನು ಕ್ರಮದಲ್ಲಿ may ಎರಡನೇ ಭಾನುವಾರ ತಾಯಂದಿರ ದಿನವಾಯಿತು..

ಈ ದಿನವನ್ನು ಅವರು ತಮ್ಮ ಹಳೆಯ(ಒರಿಜಿನಲ್) ತಯಿಯನ್ನು ಭೆಟಿಯಾಗಿ ಅವರಿಗೊಂದು ಬೊಕ್ಕೆ ಕೊಟ್ಟು ಅವರೊಂದಿಗೆ ದಿನವನ್ನು ಕಳೆಯಲು ಮೀಸಲಿಡುತ್ತಾರೆ.. ನಾವೇನು ಪಾಶ್ಚಿಮಾತ್ಯರ ರೀತಿ ದರಿದ್ರ ಜೀವನವನ್ನು ನಡೆಸುತ್ತಿಲ್ಲ ಅಲ್ವ..! ನಾವು ಜೀವನವಿಡಿ ನಮ್ಮ ಹೆತ್ತ ತಾಯಿಯೊಂದಿಗೆ ಇರುತ್ತೇವೆ ಅವರಂತೆ ತಿಂಗಳೊಂದು ತಂದೆ ತಾಯಿ ಬದಲಾಗುವ ದರಿದ್ರ ನಮಗಿಲ್ಲ. ಹಾಗಾಗಿ ನಮಗೆ ವರ್ಷದ 365 ದಿನವೂ ತಾಯಂದಿರ ದಿನವೇ. ಪಾಶ್ಚಿಮಾತ್ಯರ ಅಂದಾನುಕರಣೆ ಮಾಡುವ ಅಗತ್ಯ ನಮಗಿಲ್ಲ, ನಾನು ಮಾಡುವುದು ಇಲ್ಲ.. ಈ ಅಂದಾನುಕರಣೆ ಮಾಡುವುದನ್ನು ಬಿಡುವ ಪ್ರಯತ್ನ ಮಾಡೋಣ. ಈ ಸಂದೇಶವನ್ನು ಎಲ್ಲರಿಗೂ ತಿಳಿಸಿ ಸನಾತನ ವಾಞ್ಮಯವನ್ನು ಆಚರಿಸೋಣ.

ಶ್ರೀಕೃಷ್ಣಾರ್ಪಣಮಸ್ತು

Leave a Reply

Your email address will not be published. Required fields are marked *